ಪಟ್ಟಣದ ಮುಖ್ಯ ರಸ್ತೆಯನ್ನು 69 ಅಡಿ ಅಗಲಿಕರಣ ಮಾಡಲು ಅಧಿಕಾರಿಗಳ ನಿರ್ಲಕ್ಷ್ಯ.!
ಪ್ರಜಾ ನಾಯಕ ಜಗಳೂರು : ಪಟ್ಟಣದಲ್ಲಿ ಹಾದು ಹೋಗಿರುವ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಮುಖ್ಯ ರಸ್ತೆಯನ್ನು 69 ಅಡಿ ಅಗಲಿಕರಣ ಮಾಡಲು ಅಧಿಕಾರಿಗಳು ನಿರ್ಲಕ್ಷ್ಯ ತೋರಿ ದ್ದಾರೆ ಎಂದು ವಿರೋಧಿಸಿ ಶನಿವಾರ ರಸ್ತೆ ಅಗಲಿಕರಣ ಹೋರಾಟ ಸಮಿತಿ ಪದಾಧಿಕಾರಿಗಳು ಬಾಯಿಗೆ ಕಪ್ಪ ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಯಲು ರಂಗಮಂದಿರದಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ಮೌನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು,ಹೊಸ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಬಳಿ ಕುಳಿತು ಮೌನ ಪ್ರತಿಭಟನೆ ನಡೆಸಿ ತಾಲೂಕು ಆಡಳಿತದ ಕ್ರಮವನ್ನು ಖಂಡಿಸಿದರು.
ನೂರಾರು ವರ್ಷಗಳ ನಂತರ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ ದಿಂದ ಚಳ್ಳಕೆರೆ ಬೈಪಾಸ್ ರಸ್ತೆಯವರೆಗೂ 69 ಅಡಿ ವಿಸ್ತರಣೆ ಗೊಳಿಸಿ ಅಗಲಿಕರಣ ಮಾಡಲು ಅಧಿಕಾರಿಗಳು ಮುಂದಾಗಿದ್ದ ರಿಂದ ಕ್ಷೇತ್ರದ ಮತದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಒಂದು ವರ್ಷದಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರು ವುದು ಬೇಸರ ಸಂಗತಿ.ಗುತ್ತಿಗೆದಾರ ಬೇಜಬ್ದಾರಿತನ ದಿಂದ ಕೆಲಸ ಮಾಡಿಸುತ್ತಿದ್ದಾರೆ.ಮುಖ್ಯ ರಸ್ತೆಯ ಎರಡು ಭಾಗಗಳಲ್ಲೂ ಅಪೂರ್ಣಗೊಂಡಿದೆ.ಇದರಿಂದ ಸಾರ್ವಜನಿಕರು ಅನೇಕ ತೊಂದರೆ ಗಳನ್ನು ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಹೋರಾಟ ಸಮಿತಿ ಅಧ್ಯಕ್ಷ ಸಣ್ಣ ಓಬಯ್ಯ ಮಾತನಾಡಿ, ಆರಂಭದಲ್ಲಿ 69 ಅಡಿಗೆ ವಿಸ್ತರಣೆ ಮಾಡುವುದಾಗಿ ಹೇಳಿದ ಅಧಿಕಾರಿಗಳು ತದ ನಂತರ ವರ್ತಕರಿಗೆ ತೊಂದರೆ ತಪ್ಪಿಸಲು 50 ಅಡಿಗೆ ಸೀಮಿತಗೊಳಿಸಲಾಯಿತು. ಆದರೆ ಕೆಲವು ಕಡೆ 40 ಅಡಿ, ಇನ್ನು ಕೆಲವರು 35 ಅಡಿಯಷ್ಟು ಮಾತ್ರ ತೆರವುಗೊಳಿಸಿ ಚರಂಡಿ ನಿರ್ಮಿಸಲು ಮುಂದಾಗಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಗುತ್ತಿಗೆದಾರ ಹೋರಾಟಗಾರರನ್ನು ದಿಕ್ಕು ತಪ್ಪಿಸಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಾಗಾದರೆ ಅನ್ಯಾಯದ ವಿರುದ್ದ ಹೋರಾಟ ಮಾಡುವುದು ತಪ್ಪಾ ಎಂದು ಪ್ರಶ್ನಿಸಿದರು.
ವಕೀಲರ ಸಂಘದ ಅಧ್ಯಕ್ಷ ಟಿ. ಬಸವರಾಜ್ ಮಾತನಾಡಿ, 69 ಅಡಿ ಕಡ್ಡಾಯವಾಗಿ ತೆರವುಗೊಳಿಸಲು ಹೋರಾಟ ನಡೆಸಿದಾಗ ಸ್ಥಳಕ್ಕಾಗಮಿಸಿದ್ದ, ಜಿಲ್ಲಾಧಿಕಾರಿಗಳು, ಸ್ಥಳಿಯ ಅಧಿಕಾರಿಗಳು ಕಡ್ಡಾಯವಾಗಿ ತೆರವುಗೊಳಿಸುವುದಾಗಿ ಭರವಸೆ ನೀಡಿ ಪ್ರತಿ ಭಟನೆಯಿಂದ ಹಿಂಪಡೆಯಂತೆ ಮಾಡಿದ್ದರು. ಆದರೆ ಈವರೆಗೂ ಭರವಸೆ ಈಡೇರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸಾರ್ವಜನಿಕರು ಹೋರಾಟಗಾರರಿಗೆ ಧ್ವನಿಯಾಗಿ ನಿಲ್ಲಬೇಕು.ಈ ಹೋರಾಟ ನಮ್ಮ ಸ್ವಾರ್ಥಕ್ಕಾಗಿ ಅಲ್ಲ ಸಮಾಜದ ಒಳಿತಿಗಾಗಿ ಮಾಡಲಾಗುತ್ತಿದೆ ಎಂದರು.
ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಗ್ರೇಡ್-2 ಮಂಜಾನಂದ ಅವರಿಗೆ ಹೋರಾಟ ಸಮಿತಿ ಮನವಿ ಸಲ್ಲಿಸಿತು
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅನಂತ್, ಗೌರಿಪುರ ಸತ್ಯಮೂರ್ತಿ, ವಕೀಲ ರುದ್ರೇಶ್, ಎಸ್.ಆರ್ ಇಂದಿರಾ, ತಿಪ್ಪೇ ಸ್ವಾಮಿ, ದಸಂಸ ಸಂಚಾಲಕ ಸತೀಶ್, ನಾಗರಾಜ್, ಕಮಲ, ಸುಜಾತ,ಉಮಾದೇವಿ, ರಂಗನಾಥ್ ಸೂರಪ್ಪ, ಕುಮಾರ್, ಮಧು, ರಕೀಬ್, ಧನ್ಯಕುಮಾರ್ ಬೋರಯ್ಯ ಸೇರಿದಂತೆ ಮತ್ತಿತರರಿದ್ದರು.



