ಇಬ್ಬರು ವಿದ್ಯಾರ್ಥಿನಿಯರಿಗೆ ಶಾಸಕ ಬಿ.ದೇವೇಂದ್ರಪ್ಪ ವೈಯಕ್ತಿಕವಾಗಿ ಲ್ಯಾಪ್‍ಟಾಪ್ ವಿತರಣೆ.

ಜಗಳೂರು ಸುದ್ದಿ : ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ವಿದ್ಯಾಭ್ಯಾಸಕ್ಕೆ ಅಗತ್ಯವಾದ ಲ್ಯಾಪ್‍ಟಾಪ್ ಹಾಗೂ ವಿದ್ಯಾರ್ಥಿ ನಿಲಯ ಪ್ರವೇಶ ಸೇರಿ ಆರ್ಥಿಕ ನೆರವು ನೀಡುವ ಮೂಲಕ ಶಾಸಕ ಬಿ.ದೇವೇಂದ್ರಪ್ಪ ಶಿಕ್ಷಣ ಪ್ರೇಮ ಮೆರಯುತ್ತಿದ್ದಾರೆ.  

ಪ್ರತಿ ನಿತ್ಯ ಶಾಸಕರ ಮನೆಗೆ ಬಡ ವಿದ್ಯಾರ್ಥಿಗಳು, ವಿಕಲಚೇತ ನರು ಸೇರಿದಂತೆ ವಿದ್ಯಾಭ್ಯಾಸಕ್ಕಾಗಿ ಸಮಸ್ಯೆ ಹೇಳಿಕೊಂಡು ಹೋದವರನ್ನು ಶಾಸಕರು ಎಂದು ಬರೀಗೈಯ

ಲ್ಲಿ ಕಳಿಸಿರುವ ಉದಾಹರಣೆಗಳೇ ಇಲ್ಲ. ಅವರ ಸಾಮಥ್ರ್ಯಕ್ಕೆ ತಕ್ಕಂತೆ ಆರ್ಥಿಕ ಸಹಾಯಹಸ್ತ ಚಾಚುತ್ತ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗುತ್ತಿ ದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ದಾವಣಗೆರೆ ಸಿದ್ದಗಂಗಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವಬ ತೋರಣಗಟ್ಟೆ ಗ್ರಾಮದ ಬಡ ವಿದ್ಯಾರ್ಥಿನಿ ಎಚ್.ಉಷಾಗೆ ನಗದು 50 ಸಾವಿರ ಕೊಟ್ಟು ಪ್ರೋತ್ಸಹಿಸಿದರು. 

ಹರಿಹರದ ಪೃಥ್ವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್‍ಸಿ ವ್ಯಾಸಂಗ ಮಾಡುತ್ತಿರುವ ಲಿಂಗಣ್ಣನಹಳ್ಳಿ ಗ್ರಾಮದ ಟಿ. ಮಂಜಣ್ಣ ಅವರ ಪುತ್ರಿ ನೇತ್ರಾವತಿಗೆ 10 ಸಾವಿರ ನೀಡಿದ್ದಾರೆ. ಕಾರವಾರ ಜಿಲ್ಲೆಯ ಭಟ್ಕಳದಲ್ಲಿ ಇಂಜಿನಿಯರ್ ಓದುತ್ತಿರುವ ಎನ್.ರಮ್ಯಾ 10 ಸಾವಿರ ನೀಡಿದ್ದಾರೆ.  

" ಲ್ಯಾಪ್ ಟಾಪ್ ವಿತರಣೆ ತಾಲೂಕಿನ ನರಂಸಿರಾಜಪುರ ಗ್ರಾಮದ ಪ್ರಭಾವತಿ, ಮಿನಿಗರಹಳ್ಳಿಯ ಅರ್ಚನಾ ಇಬ್ಬರು ವಿದ್ಯಾರ್ಥಿನಿಯ ರಿಗೆ ಶಾಸಕ ಬಿ.ದೇವೇಂದ್ರಪ್ಪ ವೈಯಕ್ತಿಕವಾಗಿ ಲ್ಯಾಪ್‍ಟಾಪ್ ವಿತ ರಿಸಿದರು. ಹೀಗೆ ಶಾಸಕರಾಗಿ ಆಯ್ಕೆಯಾದಗಿನಿಂದಲೂ ವಿದ್ಯಾರ್ಥಿ ಗಳಿಗೆ ಒಂದಿಲ್ಲೊಂದು ಸಹಾಯ ಮಾಡುತ್ತಿದ್ದಾರೆ. ಶಾಸಕರ ಕಾರ್ಯಕ್ಕೆ ಪಾಲಕರು ಅಭಿನಂದಿಸುತ್ತಿದ್ದಾರೆ"

“ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬಡತನದಲ್ಲಿರುವ ಅನೇಕ ಕುಟುಂಬಗಳಲ್ಲಿ ಆರ್ಥಿಕ ಸಮಸ್ಯೆಯಿಂದ ತಮ್ಮ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳು ನನ್ನ ಬಳಿ ಬಂದಾಗ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಿದ್ದೇನೆ. ಚನ್ನಾಗಿ ಓದಿ,ವಿದ್ಯಾವಂತರಾಗಿ ಪಾಲಕರಿಗೆ ಆಸರೆಯಾದರೆ ಅದಕ್ಕಿಂದ ಸಂತೋಷ ನನಗೆ ಬೇರೊಂದಿಲ್ಲ"

-ಶಾಸಕ ಬಿ.ದೇವೇಂದ್ರಪ್ಪ, ಶಾಸಕರು, ಜಗಳೂರು.