ಸ್ವಾತಂತ್ರ್ಯ ಭಾರತದ ಪ್ರಜೆಗಳಾದ ನಾವುಗಳು....

ಪ್ರಜಾ ನಾಯಕ ವಿಶೇಷ ಸುದ್ದಿ : ನಮ್ಮ ದೇಶ ಪರಕೀಯರ ಆಳ್ವಿಕೆ ಯಲ್ಲಿ ಇನ್ನೂರು ವರ್ಷಗಳ ನಿಗ್ರಹ ಮತ್ತು ದಬ್ಬಾಳಿಕೆಯ ನಂತರ ಭಾರತವು ಆಗಸ್ಟ್ 15, 1947 ರಂದು ಬ್ರಿಟಿಷ್ ಆಳ್ವಿಕೆ ಯಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ದೇಶದ ಸ್ವಾತಂತ್ರ್ಯ ಹೋರಾಟದ ಬಲಿಪೀಠಕ್ಕೆ ತಮ್ಮ ಜೀವನ ಮತ್ತು ಸಂಪತ್ತನ್ನು ಮುಡಿಪಾಗಿಟ್ಟ ಸ್ವಾತಂತ್ರ್ಯ ಹೋರಾಟಗಾರರ ಅಸಂಖ್ಯಾತ ತ್ಯಾಗ ವನ್ನು ನೆನಪಿಸಿಕೊಳ್ಳುವ ದಿನ. ದೇಶದ ಶ್ರೀಮಂತ ಪರಂಪರೆ, ಅಸಂಖ್ಯಾತ ಸಾಂಸ್ಕೃತಿಕ ಅಭಿವ್ಯಕ್ತಿಗಳ ವರ್ಣರಂಜಿತ ಬಟ್ಟೆ, ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಳು ಮತ್ತು ಸಮಾಜದ ಶಾಂತಿ-ಪ್ರೀತಿಯ ಸ್ವಭಾವದ ಬಗ್ಗೆ ಹೆಮ್ಮೆಪಡುವ ದಿನವೂ ಹೌದು. 79ನೇ ವರ್ಷದ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಸಡಗರ ಸಂಭ್ರಮದ ಹೊಸ್ತಿಲಲ್ಲಿ ನಾವಿದ್ದೇವೆ. ಇಡೀ ದೇಶಕ್ಕೆ ದೇಶವೇ ಹಬ್ಬದ ವಾತಾವರಣದಲ್ಲಿ ಮಿಂದೆದ್ದಿದೆ.
ಅಖಂಡ ಭಾರತದಲ್ಲಿ ಸ್ವಾಭಿಮಾನದ ಸ್ವಾತಂತ್ರ್ಯಕ್ಕಾಗಿ ಸ್ವಾತಂತ್ರ್ಯ ದ ಕಿಚ್ಚು ಹಚ್ಚಿ ಹೋರಾಡಿದ ಹೋರಾಟಗಾರರ ಬಲಿದಾನ ತ್ಯಾಗ ಗಳ ಮೂಲಕ ಬಿಸಿನೆತ್ತರನ್ನು ಭಾರತ ಮಾತೆಯ ಮಡಿಲಿಗೆ ಹರಿಸಿ ನಮಗೆ ಕೊಟ್ಟ ಸ್ವಾತಂತ್ರ್ಯವನ್ನ ನಾವೆಲ್ಲರೂ ಸ್ಮರಿಸೋಣ ಮತ್ತು ಗೌರವಿಸೋಣ.ಆ ಮೂಲಕ ದೇಶದ ಆರ್ಥಿಕ,ಸಾಮಾಜಿಕ, ಶೈಕ್ಷಣಿ ಕ ರಾಜಕೀಯ ಪ್ರಗತಿಗಾಗಿ ನಾವೆಲ್ಲರೂ ದುಡಿಯೋಣ. ಭಾರತ ದೇಶದ ಪ್ರಜಾಸತ್ತಾತ್ಮಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೊಳ ಗೊಂಡು ಬೇರೆ ಬೇರೆ ಧರ್ಮ, ಜಾತಿ, ಭಾಷೆ, ವಿಭಿನ್ನ ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರಗಳಿದ್ದರೂ ವಿಭಿನ್ನತೆಯಲ್ಲಿ ಏಕತೆಯನ್ನ ಸಾರುವ ನಮ್ಮ ಭಾರತೀಯರಿಗೆ ಭಾರತ ಒಂದು ಧರೆ ಯ ಸ್ವರ್ಗವೇ ಸರಿ. ಸ್ವಾತಂತ್ರ್ಯ ದಿನಾಚರಣೆ ಕೇವಲ ಒಂದು ದಿನ ದ ತೋರ್ಪಡಿಕೆಯ ಕಾರ್ಯಕ್ರಮವಾಗಬಾರದು.ದೇಶ ಮತ್ತು ದೇಶಾಭಿಮಾನ ಎದೆಯೊಳಗೆ ಇದ್ದಾಗ ಮಾತ್ರ ಸ್ವಾತಂತ್ರ್ಯ ಎಂಬು ದು ಪರಿಪೂರ್ಣ ಅರ್ಥ ಪಡೆಯುತ್ತದೆ.
ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಪಾಲುಗಾರಿಕೆಯೂ ಮುಖ್ಯ ಪಾತ್ರ ವಹಿಸುತ್ತದೆ. ಶೈಕ್ಷಣಿಕ,ಆರ್ಥಿಕ,ಸಾಮಾಜಿಕ,ಧಾರ್ಮಿಕ,ಸಾಂವಿಧಾನಿಕ, ರಾಜ ಕೀಯ, ಪ್ರಾದೇಶಿಕ, ಪ್ರಾಕೃತಿಕ, ಮಾನಸಿಕ ಮನಸ್ಥಿತಿ ಮತ್ತು ದೈಹಿಕ ವ್ಯಾಪ್ತಿ ಇವೆರಡರ ಸಮ್ಮಿಲನದ ಒಟ್ಟು ಒಂದೊಳ್ಳೆ ನಾಗರಿಕನ ವ್ಯಕ್ತಿತ್ವವೇ ಸ್ವಾತಂತ್ರ್ಯ.ಇಂದು ನಾವು ಸ್ವಾತಂತ್ರ್ಯದ ವೈಭವವನ್ನು ಆಚರಿಸುತ್ತೇವೆ. ನಾವು ಅದನ್ನು ಕಳೆದುಕೊಳ್ಳುವವರೆಗೂ ಅದರ ಮೌಲ್ಯವು ನಮಗೆ ಅರ್ಥವಾಗುವುದಿಲ್ಲ,ಆದ್ದರಿಂದ ನಾವು ಅದ ನ್ನು ನೆನಪಿಟ್ಟುಕೊಳ್ಳೋಣ ಮತ್ತು ಅದನ್ನು ಎಂದಿಗೂ ಬಿಡದಿ ರೋಣ. ಸ್ವಾತಂತ್ರ್ಯ ಸುಲಭವಾಗಿ ಸಿಗುವುದಲ್ಲ.
ಈ ದೇಶವನ್ನು ಇಂದಿನ ದೇಶವನ್ನಾಗಿ ಮಾಡಿದ ನಮ್ಮ ರಾಷ್ಟ್ರ ನಾಯಕರಿಗೆ ನಾವೆಲ್ಲರೂ ಋಣಿಯಾಗಿದ್ದೇವೆ.ದೇಶಭಕ್ತ ನಾಗರಿಕ ರಾಗಿ, ನಮ್ಮ ನಾಗರಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಹೆಚ್ಚು ವರಿ ಪ್ರಯತ್ನವನ್ನು ಮಾಡೋಣ. ನಮ್ಮ ವೈವಿಧ್ಯತೆಯನ್ನು ದೌರ್ಬಲ್ಯವಾಗಿ ನೋಡದೆ ನಮ್ಮ ದೊಡ್ಡ ಶಕ್ತಿಯಾಗಿ ನೋಡೊಣ. ಒಟ್ಟಾಗಿ ಕೆಲಸ ಮಾಡುವುದರಿಂದ ಮಾತ್ರ ನಾವು ಚೇತರಿಸಿಕೊಳ್ಳು ವಂತಹ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವನ್ನಾಗಿ ನಿರ್ಮಿಸ ಬಹುದು.ಒಂದು ರಾಷ್ಟ್ರವಾಗಿ, ನಾವು ನಂಬಬಹುದಾದ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನಾಳುವ ನಾಯಕರು ಸಾಮಾನ್ಯ ಜನರ ಹಂಬಲ ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸು ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿ ಎಂದು ಆಶಿಸೋಣ.
" ಭಾರತೀಯರೆಲ್ಲರಿಗೂ 79 ನೇ ಸ್ವಾತಂತ್ರ್ಯ ದಿನದ ಶುಭಾಶಯ ಗಳು"
ಹೆಚ್. ಬಾಬು ಮರೇನಹಳ್ಳಿ ಸಂಪಾದಕರು ಪ್ರಜಾ ನಾಯಕ ಕನ್ನಡ ದಿನಪತ್ರಿಕೆ ಜಗಳೂರು ತಾಲೂಕು,ದಾವಣಗೆರೆ ಜಿಲ್ಲೆ