ಇಂದಿರಾ ಬಡಾವಣೆಯಲ್ಲಿ ನಡು ರಸ್ತೆಯಲ್ಲೇ ವಿದ್ಯುತ್ ಕಂಬ ಹೇಳೋರಿಲ್ಲ ಕೇಳೋರಿಲ್ಲ..!

ಇಂದಿರಾ ಬಡಾವಣೆಯಲ್ಲಿ ನಡು ರಸ್ತೆಯಲ್ಲೇ ವಿದ್ಯುತ್ ಕಂಬ ಹೇಳೋರಿಲ್ಲ ಕೇಳೋರಿಲ್ಲ..!

ಪ್ರಜಾ ನಾಯಕ  ಸುದ್ದಿ : ವಿದ್ಯುತ್ ಕಂಬಗಳು ರಸ್ತೆಯ ಇಕ್ಕೆಲ ಗಳಲ್ಲಿ ಇರಬೇಕು. ಸಾರ್ವಜನಿಕರ ಓಡಾಟದ ಸ್ಥಳದಿಂದ ದೂರ ವಿರಬೇಕು. ಆದರೆ ಪಟ್ಟಣದ ಇಂದಿರಾ ಬಡಾವಣೆಯಲ್ಲಿ ನಡು ರಸ್ತೆಯಲ್ಲೇ ವಿದ್ಯುತ್ ಕಂಬ ರಾರಾಜಿಸುತ್ತಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.  

ಕನಿಷ್ಟ 15 ವರ್ಷಗಳಿಂದ ಈ ವಿದ್ಯುತ್ ಕಂಬ ಪಟ್ಟಣದ ಹೃದಯ ಭಾಗದಲ್ಲಿರುವ ಇಂದಿರಾ ಬಡಾವಣೆಯ ನಡು ರಸ್ತೆಯಲ್ಲೇ ಸಾವಿ ಗೆ ಸ್ವಾಗತ ಎಂದು ಅಣಕಿಸುವಂತಿದೆ. ಓಣಿ ಮಧ್ಯೆ ವಿದ್ಯುತ್ ಕಂಬವಿದ್ದರೂ ಬೆಸ್ಕಾಂ ಅಧಿಕಾರಿಗಳು ಏರಿಯಾದ ಲೈನ್‍ಮನ್ ಗಾದರೂ ಕಣ್ಣಿಗೆ ಕಂಡಿರಲಿಕ್ಕಿಲ್ಲವೇ? ಎಂಬ ಪ್ರಶ್ನೆ ಜನ ಸಾಮಾನ್ಯ ರಲ್ಲಿ ಮೂಡಿದೆ. ಇಂದಿರಾ ಬಡಾವಣೆಯ ಹತ್ತಾರು ಮನೆಗಳಿಗೆ ಈ ವಿದ್ಯುತ್ ಕಂಬದಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.  

ತೀರ ಜನ ಸಂದಣಿ ಏರಿಯಾವಾಗಿರುವ ಈ ಬೀದಿಯಲ್ಲಿ ಶಾಲಾ ಮಕ್ಕಳು, ಹಿರಿಯ ನಾಗರಿಕರು ಒಡಾಡುತ್ತಾರೆ. ಶಾಲೆಗೆ ಕರೆದು ಕೊಂಡು ಹೋಗಲು ಬರುವ ಆಟೋ ಸಹ ಸಂಚರಿಸಲು ಕಷ್ಟ ವಾಗಿದೆ. ಇನ್ನು ಬಸ್, ಟ್ರಕ್ ವಾಹನಗಳ ಸಂಚರಿಸುವ ಮಾತು ದೂರ. 

" ವಿದ್ಯುತ್ ಕಂಬ ತೆರವುಗೊಳಿಸಿ ಇಲ್ಲಿನ ನಿವಾಸಿಗಳು ವಿದ್ಯುತ್ ಪೋಲ್ ಅನ್ನು ತೆರವುಗೊಳಿಸಿ ಎಂದು ಮನವಿ ಮಾಡಿದರೂ ಅಧಿಕಾರಿಗಳು ಜಪ್ಪಯ್ಯ ಎಂದಿಲ್ಲ. ಕಣ್ಣು ಕಾಣದ, ಕಿವಿ ಕೇಳದ ಅಧಿಕಾರಿಗಳಿಗೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಒಮ್ಮೆಯೂ ಇಲ್ಲಿಗೆ ಬಂದು ಸಮಸ್ಯೆ ಆಲಿಸಿಲ್ಲ ಎಂದು ನಿವಾಸಿಗಳು ಅಲವತ್ತುಕೊಂಡಿದ್ದಾರೆ "